ಎಡ್ವಡ್ರ್ಸ್, ರಿಚರ್ಡ್
	1522-1566. ಇಂಗ್ಲಿಷ್ ನಾಟಕಕಾರ, ಸಂಗೀತ ವಿದ್ವಾಂಸ, ಲೇಖಕ, ಸಂಗೀತ ರಚಕ. ಹುಟ್ಟಿದ್ದು ಸಾಮರ್‍ಸೆಟ್‍ಷೈರಿನಲ್ಲಿ. ಆಕ್ಸ್‍ಫರ್ಡಿನಲ್ಲಿ ವ್ಯಾಸಂಗಮಾಡಿ ಮಾಸ್ಟರ್ ಪದವಿ ಪಡೆದ (1547). ಲಿಂಕನ್ಸ್ ಇನ್ನಿನಲ್ಲಿ ಇವನ ಡೆಮನ್ ಅಂಡ್ ಪಿಥಿಯಾಸ್ ನಾಟಕ ಪ್ರದರ್ಶಿತವಾಯಿತು (1564). ಪ್ಯಾರಡೈಸ್ ಆಫ್ ಡೇಂಟಿ ಡಿವೈಸಸ್ ಎಂಬ ಹೆಸರಿನಲ್ಲಿ ಈತ ಸಂಗ್ರಹಿಸಿದ ವಿವಿಧ ಕರ್ತೃಗಳ ರೂಪಕಭಾಗಗಳ ಗ್ರಂಥ ಇವನ ಮರಣಾನಂತರ ಅಂದರೆ 1576ರಲ್ಲಿ ಪ್ರಕಟವಾಯಿತು. ಷೇಕ್ಸ್‍ಪಿಯರ್ ಈತನ ಒಂದು ಕವನವನ್ನು ರೋಮಿಯೊ ಅಂಡ್ ಜ್ಯೂಲಿಯೆಟ್ ಎಂಬ ತನ್ನ ನಾಟಕದಲ್ಲಿ ಉದ್ಧರಿಸಿದ್ದಾನೆ.			  
  (ಎನ್.ಎಸ್.ಎಲ್.